ನೀವು ಮನುಷ್ಯರು, ಹಾಗೆಯೇ ನಾನೂ!
ನೀವು ಹೇಗೆ ನೋವು ಮತ್ತು ಸಂಕಟವನ್ನು ಅನುà²à²µಿಸುತ್ತೀರೋ
ಹಾಗೆಯೇ ನಾನೂ!
ಈ ಸಂದರ್à²à²¦à²²್ಲಿ, ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ!
ಇಲ್ಲಿಂದ ದೂರದಲ್ಲಿ ಒಂದು ಹಳ್ಳಿ ಇದೆ!
ಒಂದು ಸಣ್ಣ ಹಳ್ಳಿ! ಜನರು ತುಂಬಾ ಕರುಣಾಮಯಿಗಳು!
ಒಂದು ಮನೆಯಲ್ಲಿ ಸಮಸ್ಯೆ ಇದ್ದರೆ,
ಎಲ್ಲರೂ ಬಂದು ಸಹಾಯ ಮಾಡುತ್ತಿದ್ದರು!
ಬೇರೊಬ್ಬರ ನೋವನ್ನು ಕಂಡರೆ,
ಎಲ್ಲರಲ್ಲೂ ಕಣ್ಣೀರು ಹರಿಯುತಿತ್ತು!
ತುಂಬಾ ಒಳ್ಳೆಯ ಜನರು!
ತುಂಬಾ ಕರುಣಾಳು ಗ್ರಾಮ!
ಆದಾಗ್ಯೂ!
ಮೂರೂ ತಿಂಗಳ ಹಿಂದೆ, ತಾಯಿ ಮತ್ತು ಮಗು!
ಅದೇ ಹಳ್ಳಿಯಲ್ಲಿ, ಸಾವನ್ನಪ್ಪಿದರು !
ಆದರೆ ಆ ಹಳ್ಳಿಯ ಜನರು!
ಅವರು ಯಾವುದೇ ನೋವನ್ನು ಅನುà²à²µಿಸಲಿಲ್ಲ!
ಅವರ ಕಣ್ಣಿನಿಂದ ಯಾವುದೇ ಕಾವೇರಿ ಹರಿಯಲ್ಲಿಲ್ಲ!
ಯಾಕೆ, ನಿಮಗೆ ಗೊತ್ತಾ?
ಸತ್ತ ತಾಯಿ ಮತ್ತು ಮಗು ಆನೆಗಳಾಗಿದ್ದವು!
ವಿದ್ಯುತ್ ಆಘಾತದಿಂದ ಅವು ಸಾವನ್ನಪ್ಪಿದವು!
ದುರಾದೃಷ್ಟವಶಾತ್, ಅವು ಮನುಷ್ಯರಾಗಿರಲಿಲ್ಲ!
ತಾಯಿ ಮತ್ತು ಮರಿ!
ಅವುಗಳಿಗೂ ಒಂದು ಕುಟುಂಬವಿತ್ತು!
ಅವುಗಳಿಗೂ ಸ್ವಂತ ಮನೆ ಇತ್ತು!
ಅವೂ à²ಾವನೆಗಳನ್ನು ಹೊಂದಿದ್ದವು!
ಮತ್ತು ಅವೂ ಸಹ ನೋವನ್ನು ಗ್ರಹಿಸಬಲ್ಲವುಗಳಾಗಿದ್ದವು!
ದುರಾದೃಷ್ಟವಶಾತ್, ಅವು ಮನುಷ್ಯರಾಗಿರಲಿಲ್ಲ!
ಒಳ್ಳೆಯದು, ಅವು ಮನುಷ್ಯರಾಗಿರಲಿಲ್ಲ!
ಇಲ್ಲದಿದ್ದರೆ!
ಅವು ತಮ್ಮ ಮನೆಗಳನ್ನು ವಿಸ್ತರಿಸುತ್ತಿದ್ದವು!
ತಮ್ಮ ವಾಸಸ್ಥಳವನ್ನು ಅತಿಕ್ರಮಿಸುತಿದ್ದವು!
ಮತ್ತು ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತಿದವು!
ಸಾವಿರ ಕಥೆಗಳಲ್ಲಿ ಇದೂ ಒಂದು ಕಥೆ!
ಉತ್ತಮ ಹಳ್ಳಿಯ ಕಥೆ!
ಜನರು ಜನರಿಗೆ ಮಾತ್ರ ಒಳ್ಳೆಯವರು!
ಆನೆಗಳು ಎಷ್ಟು à²ಾವನಾತ್ಮಕ ಜೀವಿಗಳೆಂದು!
ನಾನು ಮತ್ತೆ ನಿಮಗೆ ಇನ್ನೊಂದು ಕಥೆ ಹೇಳುತ್ತೇನೆ...
ಸಂಜೀತ ಶರ್ಮ ಪೋಖರೇಲ್ 'ಹೃದಯನಿನಾದಿನಿ'